Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಚಿಕ್ಕಜೇನಿ ಪ್ರೌಢಶಾಲೆಯಲ್ಲಿ ಅಭಿಷೇಕ್‌ ಸೇರಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಂದ ಸನ್ಮಾನ - ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ರಿಪ್ಪನ್‌‌‌ಪೇಟೆ : ಗ್ರಾಮೀಣ ಪ್ರದೇಶದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಅಗಾಧವಾದ ಪ್ರತಿಭೆ, ಚಾಣಾಕ್ಷತನ ಇರುತ್ತದೆ. ಅಂತಹ ವಿದ್ಯಾರ್ಥಿಗಳನ್ನು ಶಿಕ್ಷಕರು ಗುರುತಿಸಿ, ಹೊರ ತಂದಾಗ ಮಾತ್ರ ಆ ಮಕ್ಕಳು ಮುಖ್ಯವಾಹಿನಿಗೆ ಬರುತ್ತಾರೆ. ಇಂಥ ಕೆಲಸಗಳನ್ನು ಶಾಲಾ ಶಿಕ್ಷಕರು ಹಾಗೂ ಪೋಷಕರು ಮಾಡಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಇಲ್ಲಿಗೆ ಸಮೀಪದ ಚಿಕ್ಕಜೇನಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಆಯ್ಕೆಯಾದ ಚಿಕ್ಕಜೇನಿ  ಪ್ರೌಢಶಾಲಾ ವಿದ್ಯಾರ್ಥಿ ಕುಮಾರ್ ಅಭಿಷೇಕ್‌‌ನಿಗೆ ಸನ್ಮಾನ ಹಾಗೂ 2022- 23ನೇ ಸಾಲಿನಲ್ಲಿ ಅತ್ಯುನ್ನತ  ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಂತರ ಮಾತನಾಡಿದ ಚಿಕ್ಕಜೇನಿ ಗ್ರಾ.ಪಂ. ಅಧ್ಯಕ್ಷ ರಾಜು ಎನ್‌.ಪಿ ಅವರು, ಗ್ರಾಮೀಣ ಪ್ರದೇಶದ ಬಡ ಕುಟುಂಬದ ಈ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿರುವುದು ನಮ್ಮೂರಿಗೆ ಹೆಮ್ಮೆ. ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಧ್ಯಕ್ಷ ಉಮೇಶ್ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ, ಗ್ರಾ. ಪಂ. ಸದಸ್ಯರಾದ ಅಣ್ಣಪ್ಪ ಶೆಟ್ಟರು, ಕಳೆದ ಸಾಲಿನ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಅಧಿಕ ಅಂಕ  ಗಳಿಸಿದ 11 ವಿದ್ಯಾರ್ಥಿ ಗಳಿಗೆ ತಲಾ ರೂ. 500 ನಗದು ಬಹುಮಾನದೊಂದಿಗೆ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.

ಸಮಾರಂಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ  ಸುಜಾತ, ಸದಸ್ಯರಾದ ವೆಂಕಟಾಚಲ, ಭದ್ರಪ್ಪ ಗೌಡ, ಬಿಇಓ  ಕೃಷ್ಣಮೂರ್ತಿ, ಇಸಿಓ ಕರಿಬಸಪ್ಪ, ಸಿಆರ್‌‌ಪಿ ಸಂತೋಷ್, ಪಿಡಿಒ ಮಂಜುಳಾ, ಎಸ್.ಡಿ.ಎಂ.ಸಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಅರವಿಂದ ಭಟ್ಟರು, ಹಿರಿಯ ರಾಜಕಾರಣಿ ಬಿ.ಜಿ. ಚಂದ್ರಮೌಳಿ, ಶಶಿಕುಮಾರ್ ಜೇನಿ, ಮುಖ್ಯ ಶಿಕ್ಷಕ ಶಿವಾಜಿ , ಶಿಕ್ಷಕರಾದ ಎನ್.ಡಿ. ಹೆಗಡೆ, ಶೇಖರಪ್ಪ, ವಿಜಯ ಕುಮಾರಿ, ನಿರ್ಮಲ, ಲತಾ, ಮಹೇಶ, ವೀರನ ಗೌಡ,ಇನ್ನು ಮುಂತಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


ಕಾಮೆಂಟ್‌ಗಳಿಲ್ಲ