Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಪೊಲೀಸ್ ಠಾಣೆಯಲ್ಲಿ ಉಚಿತ ನೇತ್ರದಾನ ಹಾಗೂ ನೇತ್ರ ಚಿಕಿತ್ಸಾ ಶಿಬಿರ

ಹೊಸನಗರ : ಪೊಲೀಸ್ ಠಾಣೆಯ ಮೆಟ್ಟಿಲೇರುವುದೆಂದರೆ ಸಾರ್ವಜನಿಕರಿಗೆ ಒಂದು ರೀತಿಯ ಭಯ ಹಾಗೂ ಮುಜುಗರ. ಆದರೆ ಇಂದು ಹೊಸನಗರ ಪೊಲೀಸ್‌ ಠಾಣೆಗೆ ಸಾರ್ವಜನಿಕರು ಆರಾಮಾಗಿ ಹೋಗಿ ಬರುತ್ತಿದ್ದರು. ಕಾರಣವಿಷ್ಟೇ, ಇಂದು ಹೊಸನಗರ ಠಾಣೆಯಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ, ಕುಟುಂಬ ವರ್ಗ ಹಾಗೂ ಸಾರ್ವಜನಿಕರಿಗಾಗಿ ಉಚಿತ ನೇತ್ರದಾನ ಹಾಗೂ ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸಿದ್ದರು. ಈ ಮೂಲಕ ಪೊಲೀಸರು ಜನಸ್ನೇಹಿ ಎಂಬುದನ್ನು ಸಾಬೀತುಪಡಿಸಿದರು.

ಇಂದು ಹೊಸನಗರ ಠಾಣೆಯಲ್ಲಿ ಸಿಪಿಐ ಗುರಣ್ಣ ಎಸ್. ಹೆಬ್ಬಾಳ್, ಪಿಎಸ್ಐ ಶಿವಾನಂದ ವೈ.ಕೆ ಅವರು ತಮ್ಮ ಸಿಬ್ಬಂದಿಗಳ ಸಹಕಾರದಿಂದ ಉಡುಪಿಯ ನೇತ್ರ ಜ್ಯೋತಿ ಚಾರಿಟೆಬಲ್‌ ಟ್ರಸ್ಟ್‌ನ ಪ್ರಸಾದ್ ನೇತ್ರಾಲಯದ ನೇತ್ರ ತಜ್ಞರು ಹಾಗೂ ಸಿಬ್ಬಂದಿಗಳಿಂದ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಿದ್ದು, ನೇತ್ರ ವೈದ್ಯರಾದ ಡಾ. ಅಹನಾ ನೇತೃತ್ವದಲ್ಲಿ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಟ್ರಸ್ಟಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರೀಶ್, ಕಣ್ಣುಗಳ ಬಗ್ಗೆ ನಿರ್ಲಕ್ಷ್ಯ ಬೇಡ. ಆಗಾಗ್ಗೇ ಕಣ್ಣುಗಳ ತಪಾಸಣೆ ಮಾಡಿಸುತ್ತಿರಬೇಕು. ನಮ್ಮ ದೇಹದ ಪ್ರಮುಖ ಅಂಗ ಕಣ್ಣು. ಕಣ್ಣಿನ ಸಮಸ್ಯೆ ಇದ್ದವರು ಸಂಘ ಸಂಸ್ಥೆಗಳವರು ಹಾಗೂ ಆರೋಗ್ಯ ಕೇಂದ್ರದವರು ಏರ್ಪಡಿಸುವ ಶಿಬಿರಗಳಲ್ಲಿ ಪಾಲ್ಗೊಂಡು ಅಲ್ಲಿರುವ ಸೌಲಭ್ಯ ಪಡೆಯಬೇಕೆಂದರು.


ಸಿ ಪಿ ಐ ಗುರಣ್ಣ ಎಸ್. ಹೆಬ್ಬಾಳ ಅವರು ಮಾತನಾಡಿ, ದೇಹದ ಪ್ರಮುಖವಾದ ಅಂಗ ಕಣ್ಣು ಇಲ್ಲದಿದ್ದರೆ ಜೀವನವೇ ನಶ್ವರ ಅನ್ನಿಸುತ್ತದೆ. ಮೊಬೈಲ್ ಬಳಕೆಯಿಂದ ಇತ್ತೀಚೆಗೆ ಕಣ್ಣಿನ ಸಮಸ್ಯೆ ಎಲ್ಲಾ ವಯೋಮಿತಿಯವರಲ್ಲೂ ಕಾಣಬಹುದು. ಅನಿವಾರ್ಯವಾದರೂ ಅತಿಯಾದ ಮೊಬೈಲ್ ಬಳಕೆಯಿಂದ ದೂರವಿರಬೇಕು.ಮರಣಾನಂತರ ನೇತ್ರದಾನ ಮಾಡುವುದರಿಂದ ಇಬ್ಬರು ಅಂಧರ ಬಾಳಿಗೆ ಬೆಳಕಾಗಬಹುದಾಗಿದೆ. ಆದ್ದರಿಂದ ಕಣ್ಣಿನ ರಕ್ಷಣೆ ಬಗ್ಗೆ ಹೆಚ್ಚು ಜಾಗೂರಕರಾಗಿರಬೇಕು ಎಂದು ಸಲಹೆ ನೀಡಿದರು.

ಪಿಎಸ್ಐ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ಹೆಡ್ ಕಾನ್ಸ್‌ಟೆಬಲ್‌ ಹಾಲೇಶಪ್ಪ ಸ್ವಾಗತಿಸಿ, ವಂದಿಸಿದರು.


ಕಾಮೆಂಟ್‌ಗಳಿಲ್ಲ