Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹಳೆಬಾಣಿಗದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಹೊಸನಗರ ಪೊಲೀಸರ ಭರ್ಜರಿ ದಾಳಿ - 11 ಜನರ ಬಂಧನ 17,640 ರೂಪಾಯಿ ವಶ

ಹೊಸನಗರ : ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ ಪೊದೆಯೊಂದರ ಬಳಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಬಗ್ಗೆ ಮಾಹಿತಿ ದೊರೆತ ಹೊಸನಗರ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್. ಹೆಬ್ಬಾಳ್ ತಮ್ಮ ಸಿಬ್ಬಂದಿಗಳಾದ ಪಿಎಸ್ಐ ಎಸ್. ಜಿ. ಪಾಟೀಲ್, ಈರೇಶ್, ಮಾಯಪ್ಪ, ರಂಜಿತ್, ಸುನೀಲ್, ಮಹೇಶ್, ಗಂಗಪ್ಪ ಬಟೋಲಿರವರೊಂದಿಗೆ ದಾಳಿ ನಡೆಸಿ 11 ಜನರನ್ನು ಬಂಧಿಸಿದ್ದಾರೆ.

ಇಸ್ಪೀಟ್ ಆಟದಲ್ಲಿ ತೊಡಗಿಸಿಕೊಂಡಿದ್ದ ಇಸ್ಪೀಟ್ ಎಲೆಗಳೊಂದಿಗೆ 17,640 ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದು, ಇಸ್ಪೀಟ್ ಆಟದಲ್ಲಿ ತೊಡಗಿದ್ದ ಗ್ರಾಮದ 11 ಜನರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ